ನಾಪಂಡ ಮುತ್ತಪ್ಪ ಅವರ ಜೀವನ ನೀರಿನಂತೆ ಪಾರದರ್ಶಕ. ದುಡಿಮೆಯನ್ನು ವ್ರತದಂತೆ ಪಾಲಿಸಿಕೊ೦ಡು ಬಂದವರು. ಅನ್ಯರ ಸಂಪತಿಗೆ ಆಸೆಪಟ್ಟವರಲ್ಲ, ದುಡಿಮೆಯಿ೦ದಲೆ ಎಲ್ಲಾ ಸಂಪತ್ತು ಬರಬೇಕು ಎಂಬುದು ಅವರ ನಿಲುವು, ಹಾಗೆಯೆ ನಡೆದುಕೊಂಡು ಬಂದಿದ್ದಾರೆ, ನಡೆದುಕೊಳ್ಳುತಿದ್ದಾರೆ, ಅದೇ ಅವರ ಜೀವನ ಶೈಲಿ ಕೂಡ ಎಂದರೆ ತಪ್ಪಾಗಲಾರದು. ಅವರು ದುಡಿಮೆಯ ಹಣವನ್ನು ಕೇವಲ ವೈಯಕ್ತಿಕ ಹಿತಾಸಕ್ತಿಗಳಿಗೆ ಬಳಸಿಕೊಳ್ಳದೆ, ಹಲವಾರು ಸಮಾಜ ಸೇವಾ ಕಾರ್ಯಗಳಿಗೆ ಬಳಸಿರುವುದು ಅವರ ಸಾಮಾಜಿಕ ಕಳಕಳಿಗೆ ಹಿಡಿದಿರುವ ಕೈಗನ್ನಡಿ ಎನ್ನಬಹುದು. ಇವರ ವ್ಯಕ್ತಿತ್ವ ಏನು ಎಂಬುದನ್ನು ಈ ಒಂದು ಸಣ್ಣ ಘಟನೆ ವಿವರಿಸುತ್ತದೆ. ಇವರು ಒಂದು ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಕಾಯ೯ ನಿರ್ವಹಿಸುತ್ತಿದ್ದರು. ಅಲ್ಲಿನ ಅಧಿಕಾರಿಯೊಬ್ಬರು ತಮ್ಮ ವಹಿವಾಟಿನ ಲೆಕ್ಕಪತ್ರ ಸರಿದೂಗಿಸಲು ಒಂದು ಚಿಕ್ಕ ಮೊತ್ತದ ಓಚರ್ ಗೆ ಸಹಿ ಹಾಕಲು ಒತ್ತಾಯಿಸಿದರು. ಅದು ಸಂಸ್ಥೆಯ ನಿಯಮಗಳನ್ನು ಮೀರುವಂತಿತ್ತು ಎ೦ಬ ಕಾರಣದಿಂದ, ಅದಕ್ಕೆ ಸಹಿ ಹಾಕಲು ಅದರ ಆತ್ಮಸಾಕ್ಷಿ ಒಪ್ಪದೆ, ತಕ್ಷಣವೆ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದರಂತೆ. ಈ ಸನ್ನಿವೇಶ ವೃತ್ತಿರಂಗದಲ್ಲಿ ಆತ್ಮಭಿಮಾನಕ್ಕೆ ಇವರು ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ತಿಳಿಸುತ್ತದೆ. ಇಂತಹ ಪ್ರಾಮಾಣಿಕ ವ್ಯಕ್ತಿ ನಮ್ಮ ನಾಯಕನಾಗಬೇಕು ಎಂದು ಕೊಡಗಿನ ಜನ ಆಶಿಸುತ್ತಿದ್ದಾರೆ. ಇವರ ಪ್ರಾಮಾಣಿಕ ಜೀವನ, ಜನೋಪಕಾರಿ ಮನೋಭಾವ ಜನನಾಯಕನ್ನಾಗಿ ರೂಪಿಸಿದೆ.
Follow us on:
https://www.facebook.com/wesupportnapandamuthappa/
Follow us on:
https://www.facebook.com/wesupportnapandamuthappa/

No comments:
Post a Comment